Global Humanity Mangaluru (GHM)
ಸಮಾಜ ಮತ್ತು ಸಮುದಾಯದ ಉನ್ನತಿ, ಆರ್ಥಿಕವಾಗಿ ಹಿಂದುಳಿದ ಅಸಹಾಯಕ ಜನರಿಗೆ ಶಾಶ್ವತ ಪರಿಹಾರ ನೀಡುವ ಉದ್ದೇಶದಿಂದ ಹಾಗೂ ಯುವ ಜನತೆಯ ಉಜ್ವಲ ಭವಿಷ್ಯ ಮತ್ತು ಅದಕ್ಕಾಗಿ ಪ್ರೇರಣೆ ಮತ್ತು ಶಾಂತಿಯುತ ಸಮಾಜ ಹಾಗೂ ಸೌಹಾರ್ದತೆಯ ಉದ್ದೇಶವನ್ನು ಪ್ರಮುಖವಾಗಿ ಮುಂದಿಟ್ಟುಕೊಂಡು GHM ಫೌಂಡೇಶನ್ (ರಿ) ಉಗಮವಾಯಿತು.
ಮೂಲರಪಟ್ನಹಾಗೂ ಆಸುಪಾಸಿನ ಎಲ್ಲಾ ಯುವಕರು ಸೇರಿ ತಾವೆಲ್ಲರೂ ಒಂದು ಸಂಘಟನೆಯ ಮೂಲಕ ತಮ್ಮ ದುಡಿಮೆಯ ಒಂದು ಅಂಶವನ್ನು ಚಾರಿಟಿಗೆ ಉಪಯೋಗಿಸಬೇಕೆಂಬ ದೃಢ ಮನಸ್ಸಿನೊಂದಿಗೆ ಹುಟ್ಟಿದ ಸಂಸ್ಥೆಯಾಗಿದೆ. ಮುಂದೆ ಹಲವಾರು ಉತ್ತಮ ರೀತಿಯ ಕಾರ್ಯಕ್ರಮ ಊರಿನಲ್ಲಿರುವ ಹಲವು ಯುವಕರ ಹಿರಿಯ ಕಿರಿಯರ ಪ್ರಶಂಸೆಗೆ ಪಾತ್ರವಾದ ಈ ಸಂಘಟನೆ GHM ಇದರ ಮೆಂಬರ್ಸ್ ಟೀಮ್ ಮೂಲಕ ಸದಸ್ಯತ್ವ ಪಡೆವ ಮೂಲಕ ಎಲ್ಲರಿಗೂ ಅವಕಾಶ ನೀಡಲಾಯಿತು... ಮುಂದೆ 8 ವರ್ಷದಲ್ಲಿ ನಡೆದದೆಲ್ಲ GHM ಫೌಂಡೇಶನ್ (ರಿ )ಇದರ ನಿರಂತರ ಪರಿಶ್ರಮಕ್ಕೆ ಶಾಕ್ಷಿಯಾದ ಬಡ ಜನರ ಸೇವೆ ಹಾಗೂ ಸದೃಢ ಸಮಾಜದ ನಿರ್ಮಾಣ.